Current Date 13 Jun, 2026

ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ವಿರುದ್ಧ ಕೆಂಡ ಕಾರಿದ ಮಾಳವಿಕಾ ಅವಿನಾಶ್...!

ಚಿತ್ರರಂಗದಲ್ಲಿ ಸಾಮಾನ್ಯವಾಗಿ ಅನೇಕರು ತಮ್ಮ ಮಕ್ಕಳನ್ನು ಬೇರೆ ಯಾವುದೋ ಲೋಕದಲ್ಲಿ ಜನ್ಮ ಪಡೆದು ಬಂದವರಂತೆ ಬೆಳೆಸುವ ಸಂಪ್ರದಾಯ ಇದೆ. ಹೈ ಫೈ ಜೀವನ, ಮೋಜು ಮಸ್ತಿಯಲ್ಲಿಯೇ ಇವರ ಮಕ್ಕಳು ಕಳೆದು ಹೋಗುತ್ತಾರೆ. ಇದರಿಂದ ಸಹಜವಾಗಿ ಬಾಲ್ಯದಿಂದ ವಂಚಿತರಾಗುತ್ತಾರೆ. ಇನ್ನೂ ಇವರನ್ನು ಹೆತ್ತವರು ತಮ್ಮ ಮಕ್ಕಳು ಹೋದಲ್ಲಿ ಬಂದಲ್ಲಿ, ಕುಂತಲ್ಲಿ ನಿಂತಲ್ಲಿ ಸೇವೆ ಮಾಡಲು ಆಳುಗಳನ್ನು ನೀಡಿ, ಹಣದ ಅಮಲನ್ನೇರಿಸಿ, ಬೇಡದ ತೆವಲುಗಳನ್ನು ಇವರಿಗೆ ಮೆತ್ತಿ ತಮ್ಮ ಮಕ್ಕಳ ಸುಂದರ ಬದುಕನ್ನು ತಾವೇ ಹಾಳು ಮಾಡುತ್ತಾರೆ. ತಮ್ಮ ಮಗಳು ಆರಾಧ್ಯ ಅವರ ಬದುಕನ್ನು ಐಶ್ವರ್ಯ ರೈ ಇದೇ ರೀತಿ ಹಾಳು ಮಾಡುತ್ತಿದ್ದಾರಾ ಎಂಬ ಅನುಮಾನ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ.